3-4 Jan 2026 - Residential camp (Shibira) at Tathaguni campus
ಶ್ರೀಗುರುಭ್ಯೋ ನಮಃ
ಶೈಕ್ಷಣಿಕ ಶಿಬಿರ
ಶ್ರೀಹರಿ -ವಾಯು-ಗುರುಗಳ ಪರಮಾನುಗ್ರಹದಿಂದ ಶ್ರೀವಿಶ್ವೇಶಧಾಮ ಗುರುಕುಲವು ಬೆಂಗಳೂರಿನ ತಾತಗುಣಿಯಲ್ಲಿ 2026 ರ ಜನವರಿ 3 ಮತ್ತು 4ನೇ ತಾರೀಖಿನಂದು ಶೈಕ್ಷಣಿಕ ಶಿಬಿರವನ್ನು ಆಯೋಜಿಸುತ್ತಿದೆ . ಈ ಶಿಬಿರದಲ್ಲಿ ಗುರುಕುಲಕ್ಕೆ ಪೂರ್ಣಕಾಲಿಕವಾಗಿ ಸೇರಲು ಬಯಸುವ ಉಪನೀತರಾದ ವಟುಗಳಿಗೆ ಗುರುಕುಲದ ಪೂರ್ಣಪರಿಚಯವನ್ನು ಮಾಡಿಕೊಡುವುದರ ಮೂಲಕ ಕೆಲವು ವೇದಸೂಕ್ತಗಳನ್ನು ಹಾಗೂ ಸ್ತೋತ್ರಗಳನ್ನು ಹೇಳಿಕೊಡಲಾಗುವುದು. ಗುರುಕುಲದಲ್ಲಿ ಅರೆಕಾಲಿಕ [ಬೆಳಗ್ಗೆಯಿಂದ ಸಂಜೆಯತನಕ] ವಿದ್ಯಾರ್ಥಿಗಳಾಗಿ ಸೇರಬಯಸುವವರಿಗೂ ಅವಕಾಶವಿರುತ್ತದೆ. ಅವರಿಗೂ ಈ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ.
ಶಿಬಿರದಲ್ಲಿ ನಡೆಯುವ ಕಾರ್ಯಕ್ರಮಗಳ ವಿವರಣೆ:
03-01-2026 ಶನಿವಾರ
ಸಂಜೆ 4:00 ಘಂಟೆಗೆ ಸಭೆ. ವಿದ್ಯಾರ್ಥಿ-ಪಾಲಕರ ಜೊತೆ ಸಂವಾದ. ಪ್ರಶ್ನೋತ್ತರ ಕಾರ್ಯಕ್ರಮ.
ಸಂಜೆ 5:30 ಕ್ಕೆ ಶೀಸತ್ಯನಾರಾಯಣ ಪೂಜೆ ಪ್ರಾರಂಭ. ವಿಷ್ಣುಸಹಸ್ರನಾಮ ಪಾರಾಯಣ. ಭಜನೆ. ಅಷ್ಟಾವಧಾನಸೇವೆ. ಮಹಾಪೂಜೆ.
8:00 ಘಂಟೆಗೆ ಪ್ರಸಾದ ವಿನಿಯೋಗ.
9:00 - 9:30 ಶಿಬಿರದ ವಿದ್ಯಾರ್ಥಿಗಳೊಂದಿಗೆ ಸಂವಾದ. ಕಥಾಕಾಲಕ್ಷೇಪ.
9:30 ಕ್ಕೆ ಮಲಗುವುದು.
04-01-2026 ಭಾನುವಾರ
5:30 ಏಳುವುದು
6:00 ಪ್ರಾರ್ಥನೆ
6:30 ಸ್ನಾನ - ಸಂಧ್ಯಾವಂದನೆ
7:30 ಶ್ರೀಕೃಷ್ಣಾಷ್ಟೋತ್ತರ ಶತನಾಮಸ್ತೋತ್ರ ಪಾಠ-ಪಾರಾಯಣ
8:00 ಉಪಾಹಾರ
8:30 ಸುದ್ದಿ - ಸಮಾಚಾರ
9:00 ಸಂಸ್ಕೃತ - ಸಂಭಾಷಣೆ ತರಗತಿ
9:50 ಭಜನೆ ಪಾಠ
10:40 - 11:00 ವಿರಾಮ [ಅಡಿಗೆಗೆ ಸಹಾಯ...]
11:40 ಪಂಚತಂತ್ರ ಕಥೆಗಳು
12:20 ಊಟ
1:30 ಸಂಧ್ಯಾವಂದನೆಯ ಮಂತ್ರಗಳು
2:40 - 3:00 ವಿರಾಮ
3:00 ಶ್ರೀ ಸತ್ಯನಾರಾಯಣಾಚಾರ್ಯರಿಂದ ಪ್ರವಚನ (ವಿಷಯ: ಏಕೆ ಬದುಕಬೇಕು? ಹೇಗೆ ಬದುಕಬೇಕು?)
3:50 ಹರಟೆ
4:30 ಆಟ [ಮೈದಾನದಲ್ಲಿ]
5:30 ಸಂಧ್ಯಾವಂದನೆ
6:00 ವಿಷ್ಣುಸಹಸ್ರನಾಮ ಪಾರಾಯಣ
6:45 ಭಜನೆ, ಸಂಗೀತ
7:15 ಉಪನ್ಯಾಸ
8:00 ಊಟ
8:45 ಪ್ರಶ್ನೋತ್ತರ ಕಾರ್ಯಕ್ರಮ
To attend the Shibira, please fill out the below form...